ಈಶ್ವರಕೃಷ್ಣ
ಸುವರ್ಣ ಸಪ್ತತಿ ಅಥವಾ ಸಾಂಖ್ಯಕಾರಿಕಾ ಎಂಬ ಗ್ರಂಥದ ಕರ್ತೃ. ಸುಮಾರು ಕ್ರಿ.ಶ. 4ನೆಯ ಶತಮಾನದಲ್ಲಿ ಇದ್ದನೆಂದು ವಿದ್ವಾಂಸರ ಅಭಿಪ್ರಾಯ. ಜೀವನಕ್ಕೆ ಸಂಬಂಧಪಟ್ಟ ಯಾವ ವಿವರಗಳೂ ದೊರೆಯುವುದಿಲ್ಲ. ಪುರಾತನವೂ ವಿಸ್ತಾರವೂ ಆದ ಸಾಂಖ್ಯದರ್ಶನವನ್ನು 70 ಆರ್ಯಗಳಲ್ಲಿ ಬರೆದನೆಂದು ತಾನೇ ಹೇಳಿಕೊಂಡಿರುವುದರಿಂದ ಸಾಂಖ್ಯಕಾರಿಕೆಯ ಕರ್ತೃ ಈತನೆಂದು ತಿಳಿದುಬರುತ್ತದೆ. ನಿರ್ದಿಷ್ಟ, ವಿಚಾರಪೂರ್ಣ ಮತ್ತು ಅಧಿಕಾರಯುತವಾದ ಈತನ ಪುಸ್ತಕ ಈಗಲೂ ಸಂಖ್ಯಶಾಸ್ತ್ರದ ಮುಖ್ಯ ಪ್ರಮಾಣಗ್ರಂಥವಾಗಿದೆ.
                          (ಕೆ.ಬಿ.ಆರ್.)